ಒಲವ ಚುಂಬನ -A Proposal
ಚುಂಬಿಸಿ ಚಂದಿರನ ಕಿರಣ ,ತಬ್ಬಿದೆ ಇಳೆಯ ಇರುಳ ಮೌನ
ತಂಗಾಳಿಯಲಿ ತೇಲಿ ಬಂದ ಮೇಘವೂ
ಪಿಸುಗುಡುತಿದೆ ನಮ್ಮ ಪ್ರೇಮ ಗಾನ
ಜಿನುಗಿದ ಹನಿಗಳು ವಸುಧೆಯ ಮುತ್ತಿಟ್ಟು ,
ಸೂಸಿದೆ ನಿನ್ನದಯೇ ಪರಿಮಳ
ಅಂಬರದ ತಾರೆಗಳೂ ಛೇಡಿಸುತಿವೆ
ಮಿನುಗುತಿಹ ನನ್ನೀ ವದನವ
ಬೆಳದಿಂಗಳು ಇಳಿದು , ನೇಸರನು ಇಣುಕಿದರೂ
ಕನಸುಗಳೇ ತುಂಬಿದೆ ತೆರೆದ ಈ ಕಂಗಳ
ಸಮ್ಮುದದ ಅಲೆಯೊಂದು ಹೊಮ್ಮಿದೆ ,
ಇದಕೆಲ್ಲಾ ಯಾರು ತಾನೇ ಕಾರಣ ,
ಎಲ್ಲಿ ಅಡಗಿದ್ದೆಯೋ ಮನ-ಮೋಹನ,
ಈ ತಳಮಳಕ್ಕೆ ನೀನೇ ತಾನೆ ಕಾರಣ . . .
-ಪ್ರಜ್ಞಮಾಲಾ
0 comments:
Post a Comment