Saturday 23 February, 2013


ಮಾತು ನನ್ನಲ್ಲೂ ಇದೆ ...
ಮಾತು ನಿನ್ನಲ್ಲೂ ಇದೆ ...

ಮನಬಿಚ್ಚಿ ಹೇಳುವುದು  ಹೇಗೆ ...
ಮೌನ ಮುರಿಯುವುದು ಹೇಗೆ...


ಬಿಗುಮಾನದ ಪರದೆ ಇಳಿಯುವವರೆಗೆ,
ಸಿಹಿ ಕಲರವ ಸನಿಹ ಸೆಳೆಯುವವರೆಗೆ,  
     ಕಹಿಯ ಈ ವಿರಹ ನಿರಂತರವು ನಮಗೆ ....

ಮಾತು ನನ್ನಲ್ಲೂ ಇದೆ ...
ಮಾತು ನಿನ್ನಲ್ಲೂ ಇದೆ ...
ಅದೇಕೋ.... 
ಮಾತಿನ ಬಾನಂಗಳದಲಿ ,
ಮೌನದ ಕರಿ-ನೆರಳು ದಟ್ಟವಾಗುತಲೇ ಇದೆ ... 
-ಪ್ರಜ್ಞಮಾಲಾ