Sunday 29 March, 2015

ನೆನಪು - Sometimes You will never know the VALUE of a Memory until it becomes a Memory. But, Memories are the BEST to make in this short Life :)

ನೆನಪು

ಆ ನಗು -ಮಾತು-ಮೌನ ,  ನಿನ್ನ ಸಾನಿಧ್ಯ 
 ಪ್ರತಿ ಕ್ಷಣದಲಿ ನನಸಾಯಿತು ಅದೆಷ್ಟೋ ಸ್ವಪ್ನ 
ವಿನೋದವು ಕಳೆದ ಒಂದೊಂದು ಕ್ಷಣ 

ಕಾಡಲಿಲ್ಲ ನೇಸರನ ಉರಿ ತಾಪ ,
ಕಾಣಲೂ ಇಲ್ಲ ಚಂದಿರನ ಪೆಚ್ಚು ನೋಟ, 

ಹರಿಯುತ್ತಿದ್ದ ನಮ್ಮಯ ಮಾತಿನ ಧಾರೆಗೆ 
ಮೌನದಲಿ ನಿದ್ದೆಗೆ ಜಾರಿದಳು ನೀರಧಿಯೂ  ಹಾಗೆ 

ನಗುವಿನ ಅಲೆಗೆ ಮೌನದ  ತೀರ ,
ನಾಳೆಗಳ  ಪರಿವೇ ಇಲ್ಲದೇ ಸಾಗಿತ್ತು ,
ನೆನಪುಗಳ ಸುಂದರ  ವಿನಿಮಯ 

ಜೊತೆಗಿದ್ದರೆ  ನೀನು ಎಲ್ಲವೂ ಅನನ್ಯ 
ಬೊಗಸೆಯಲ್ಲಿ ಹಿಡಿದಿಟ್ಟೆ ವಿಶೇಷವು ನನಗೆ 
- ನಿನ್ನೊಡನಾಟದ ಪ್ರತಿಯೊಂದು  ಕ್ಷಣ 

ಹಿಡಿದಿಟ್ಟರೇನು ಮರೆಯಾದ ಆ ಕ್ಷಣಗಳ ,
ಮರಳಿ ಸೃಷ್ಟಿಸಲಾರೆ ಆ ಕ್ಷಣಗಳ ಸವಿ-ಸವಿ ಅನುಭವ   
 -ಪ್ರಜ್ಞಮಾಲಾ