ಸತ್ಯ-ನಿತ್ಯ
ಸ್ಪರ್ಧೆಯೋ . . . ಇಲ್ಲಿ ಸ್ವಾರ್ಥವೋ ...
ಮುಖವಾಡಗಳೇ ಇಲ್ಲಿ ಸ್ವರೂಪವೊ
ವ್ಯಸನವೋ . . . ಇಲ್ಲಿ ಕತ್ತಲೆಯೋ ...
ನಂಬಿಕೆಯೇ ನಿನ್ನ ಶತ್ರುವೋ ,
ಸುಳ್ಳಿನ ಮಹಪೂರವೋ ,
ಸತ್ಯವೂ ಇಲ್ಲಿ ಬೆತ್ತಲೆಯೋ ...
ಇಲ್ಲಿ ಇದುವೇ ನಿತ್ಯವೋ .
ಭಾವನೆಗಳ ಹಿಂಡಿ , ಮೌಲ್ಯಗಳ ಧಿಕ್ಕರಿಸಿ
ಕರುಣೆಯ ತೋರದ ಸರದಾರನು
ಅವನೇ ಇಲ್ಲಿ ಸಾಹುಕಾರನು . . .
ಅರಿತರೂ ,
ಮರಳರೋ ನಾವು . . .
ಬೆರೆತು - ನಗುತಾ ಕೂಪಕ್ಕೆ ಬೀಳಲು ಸಿದ್ಧರಾಗಿಹೆವು . . .
ನಾವಿಲ್ಲಿ ಅಸಹಾಯಕರೋ ,ಮತಿಹೀನರೋ
ಅಥವಾ
ತುಳಿದು ಮೇಲ್ನುಗ್ಗುವ ಪ್ರಚಂಡರೋ . . .
ಜಗಕೆ ಅಂಟಿಹುದು
ವಿಷವೋ ಇದು ,
ಅಲ್ಲಲ್ಲಾ ಅನಿವಾರ್ಯದ ಅಮಲೋ!
ಬದಲಾವಣೆಯ ಭ್ರಮೆಯು ನೆತ್ತಿಗೇರಿದರೆ ,
ಹಿತವರನು ಹುಡುಕ ಹೊರಟರೆ
- ಶೂನ್ಯದಲೇ ಕಳೆದು ಹೋದೇವು, ವಸುಧೆಯ ಒಡಲೊಳಗೆ ಬೆರೆತೇವು ಜೋಕೆ . . .
ಬದುಕು ಇಲ್ಲಿ ಮಾರಿಯೋ
ಮಹಾ - ಮಾಯೆಯೋ
ಜೋಕೆ -ಜೋಕೆ
-ಪ್ರಜ್ಞಮಾಲಾ
0 comments:
Post a Comment