Tuesday 24 January, 2012

ಮರು-ಪ್ರಶ್ನೆ



ಅಂದು ಆ ನೋಟದಲ್ಲಿ ನನ್ನ ಅಸಹಾಯಕತೆ ಕಾಣಲೇ ಇಲ್ಲವೇನು ? ...
ನಿನ್ನ ಪ್ರತಿ ಕಂಬನಿ-ಹುಸಿ ನಗೆಯಲ್ಲೂ ನನ್ನ ಹತಾಶೆ ಕೂಡಿರಲಿಲ್ಲವೇನು!!!

ದ್ವಾರದಲಿ ನೀ ಕಂಡ ಆ ಹುಸಿನೋಟ ....

ನನ್ನ ಮನದಲಿ ಎದ್ದ ಬಿರುಗಾಳಿಯ ತೋರಲಿಲ್ಲವೇನು !!!...

ಸಮಾಜದ ಆ ನಿಲುವಿಗೆ ,

ನನ್ನವರ ನಿಕ್ರಷ್ಟ ನೋಟಕೆ ...
ಪ್ರೀತಿಯ ನಿಕಷದಲಿ ಸೋತ
ನನ್ನೀ ಮನದ ರೋದನೆ ಕೇಳುತ್ತಿಲ್ಲವೇನು !!!
 


ಚೂರಾದ ಮನವನು ನಿತ್ಯ ಕಲ್ಲಾಗಿಸಿ ,
ನನಸಾಗದ ಕನಸುಗಳಲಿ ದಿನವೂ ಬೇಯುತಾ ,
ಬದುಕಿನ "ಅರ್ಥ"ಗಳಿಂದ ಓಡುತಿರುವ
ಈ ನನ್ನ ಆರ್ತನಾದ   ಅರ್ಥಹೀನವೇನು !!!

ಮಗುವಿನಂತೆ ಮುದ್ದಿಸಿ, ಗೆಳೆತಿಯಂತೆ ಆಧರಿಸಿ ,
ಕರೆಗಳಿಗೆ ಓಗೊಟ್ಟು,ಕನಸುಗಳಲಿ ಜೊತೆಯಾದ
ಆ ನಿರ್ಮಲ-ದಿನಗಳು ಸುಮಧುರವಲ್ಲವೇನು.... ???

ದ್ವಂದ್ವಗಳ ನಡುನೀರಲ್ಲಿ ತೇಲಿಬಿಟ್ಟ ನಂಟು
ಈಗ "ತಾಗ್ಯ"ವಲ್ಲವೇನು!!! .....

ವಿರಹದ ಈ ನೋವಿಗೆ ನೀನೇ ಹೇಳು " ಗೆಳೆಯ"
ಕೊನೆಯೇ ಇಲ್ಲವೇನು?......
                                                       -ಪ್ರಜ್ಞಮಾಲಾ

"ಮೌನ "

ಪ್ರೀತಿಯ ಮೌನ ಸಹಿಸ ಬಹುದ್ದಿತ್ತೇನೋ ...
ಪ್ರಿಯನ ಒಲವಿನ ನಿರೀಕ್ಷೆ ಸಿಹಿ ತರುತ್ತಿತ್ತೇನೋ ...
ಆದರೆ ...
ನಿರ್ಲಕ್ಷ್ಯದ ಈ ಮೌನ ಕಹಿ ಎನಿಸುತಿದೆ ,
ಒಲವ ನಿರೀಕ್ಷೆಯ ಹುಸಿಯಾಗಿಸಿದೆ . . .
ಪ್ರಿಯನ ದ್ವೇಷದ ಬಿಸಿ ಮನವ ರಾರಾಜಿಸುತಿದೆ ,
ಅಶ್ರುಗಳು ಕಂಗಳ ಸ್ನೇಹ ಮಾಡಿದೆ ....

"ಬಿನ್ನಹ" : ಸ್ನೇಹ - ಪ್ರೀತಿಯ ಆರೈಕೆಯಲಿ ಬೆಳೆಯಲು ಸಾಧ್ಯವೇ ?... ಈ ದ್ವಂದ್ವದ ಸುಳಿಯಲ್ಲಿ ಸಿಲುಕಿರುವ ಮನದ ಬಿನ್ನಹ

ಓಡುತಿರುವೆ ನಾ ದೂರ ನಿನ್ನಿಂದ
ಆ ನೋಟ , ಆ ನಗು, ಆ ಮಾತು , ಆ ಕನಸು
ಅಳಿಸಿಹಾಕುತಿರುವೆ ಈ ಮನದಿಂದ
ಆದರೂ . . .ಹೀಗೇಕೆ . . .
ಪೀಡಿಸುತಿರುವೆ  ಮತ್ತೇರಿಸುವ  ಕಂಗಳಿಂದ
ಕಾಡುತಿರುವೆ ಆ ಒಲ್ಮೆಯ ನುಡಿಗಳಿಂದ
ಜೊತೆಯಲಿರುವೆ ಮಧುರ ಬಾಂಧವ್ಯದಿಂದ...

ನಿನ್ನ ಸಾನಿಧ್ಯದ ಸಿಹಿ
ವಿಷವಾಗುತಿದೆ ನನಗಿನ್ನು. . .
ನಿನ್ನ ಸ್ನೇಹದ ಮರೆಯಲ್ಲಿ ,
 ನನ್ನೀ  ಪ್ರೀತಿಯ ಅಡಗಿಸಲಾರೆ  ನಾ ಇನ್ನು..

ಭಾವಗಳ ಬದಿಗೊತ್ತಿ ,

ನಟಿಸಲಾರೆ ನಾ   ಇನ್ನು . . .
ಕಲ್ಲಾಗಿಸಲಿ ಹೇಗೆ  ಈ ಮನವ ನಾ ಇನ್ನು...

ಪಾರಾಗಲಿ ಹೇಗೆ ಈ  ಮೋಹ-ಜಾಲದಿಂದ,

ತಿಳಿಸು ನೀನೇ ಇನ್ನು ...
                                                                               -ಪ್ರಜ್ಞಮಾಲಾ 


 

Tuesday 10 January, 2012

"ಸ್ನೇಹ": ಸ್ನೇಹದ ಬಂಧನ- ದಿವ್ಯ ಸ್ಪಂದನ


ಸ್ನೇಹ ಮಧುರ ಬಾಂಧವ್ಯ ...
ಮಾತಿನಲಿ ಬೆಳೆದು ...
ಮೌನದಲಿ ಅರಳಿ ....
ನೆನಪಿನಲಿ ಜೊತೆಯಾಗುವ ದಿವ್ಯ ಸ್ಪಂದನ .