ವಿಧಿ
ವಿಧಿಗೆ ಋಣದ ಕಡಿವಾಣ ಇಹುದು ,
ಋಣಕೆ ವಿಧಿಯ ಸೆಳೆತವಿಹುದು
ಕೇಳಿ , ಹೇಳಿ , ಹಿಡಿದು ಜಗ್ಗಿದರೂ ...
ಮೌನ ತೆಳೆದು , ಮುನಿದು ದೂಡಿದರೂ ...
ಒಲಿಸಿ, ಆಲಿಸಿ, ಪಾಲಿಸಿ ಬಯಸಿದರೂ
ಕೂಗಿ ಕರೆದು , ದೈನ್ಯದಿ ಬೇಡಿದರೂ
ಇರುವುದರ ಬಿಟ್ಟು , ಇರದುದರೆಡೆಗೆ ತುಡಿದರೂ
ಆಸೆ - ನಿರಾಸೆ -ದುರಾಸೆಗಳ ಮೋಹದಲಿ ಸಿಲುಕಿದರೂ
ಪಾಲಿಗೆ ಸಿಗುವುದು ವಿಧಿ ಲಿಖಿತವು ,
ಅದೃಷ್ಟ ಒಮ್ಮೆಯಾದರೆ , ಮಗದೊಮ್ಮೆ ದುರ್ಭಾಗ್ಯವು
ಈ ಕಾಲನು ಮಾಂತ್ರಿಕನು , ವಿಧಿಯೇ ಆತನ ಮಾಯಾಜಾಲವು
ಪೀಡಿಸುತಾ - ತಿಳಿಸುವ ಆತನೇ ನಕ್ಷತ್ರಿಕನು , ನಮ್ಮ ಪರೀಕ್ಷಕನು
ನಾವೆಲ್ಲರೂ ಆತನ ಕೈಗೊಂಬೆಗಳು
-ಪ್ರಜ್ಞಮಾಲಾ
0 comments:
Post a Comment