ಕನಸು
ಒಲವ ಕನಸು ನನಸಾಗಿದ್ದರೆ, ಎಷ್ಟು ಸುಂದರವಿತ್ತೋ ಗೆಳೆಯ ...
ಒಲವ ಕನಸು ನನಸಾಗಿದ್ದರೆ, ಎಷ್ಟು ಸುಂದರವಿತ್ತೋ ಗೆಳೆಯ ...
ನಿನ್ನ ಪ್ರೀತಿಯಲಿ ಅರಳುತ್ತಿದ್ದೆ ,
ಮಾತುಗಳ ಇಂಪನು ಸವಿಯುತ್ತಿದ್ದೆ ,
ಮಾತುಗಳ ಇಂಪನು ಸವಿಯುತ್ತಿದ್ದೆ ,
ನಗುಮೊಗವ ಕಂಗಳಲೇ ಇರಿಸುತ್ತಿದ್ದೆ ,
ಮಾತಿನ ಮೋಡಿಯಲಿ ನಿನ್ನ ಸೆಳೆಯುತ್ತಿದ್ದೆ ,
ಸನಿಹತೆಯ ಸಮ್ಮುದಕೆ ಬೆರಗಾಗುತ್ತಿದ್ದೆ,
ನವಿರೇಳಿಸುವ ಸ್ಪರ್ಶಕೆ ನಲಿಯುತ್ತಿದ್ದೆ,
ಮನದುಂಬಿ ನಿನ್ನನೇ ಆರಾಧಿಸುತ್ತಿದ್ದೆ...
ಮನದ ಇಂಗಿತವು,
ಪ್ರೇಮ ನಿವೇದನೆಯು
ಕನಸಾಗಿಯೇ ಉಳಿಯುತ್ತಲ್ಲೋ ಗೆಳೆಯ ! ...
ಪ್ರೇಮ ನಿವೇದನೆಯು
ಕನಸಾಗಿಯೇ ಉಳಿಯುತ್ತಲ್ಲೋ ಗೆಳೆಯ ! ...
0 comments:
Post a Comment