ಒಲವ ಛಾಯೆ
ಮಾತುಗಳು ಭೋರ್ಗರೆಯುತಿಹುದು ಮನದಲ್ಲಿ ,ನೋವ ಛಾಯೆ ತುಂಬಿಹುದು ಈ ಮೌನದಲ್ಲಿ ,
ದೂರ ಸರಿದರೂ ...ಮಾತು ಮರೆತರೂ...
ಭಾವಗಳ ತೊರೆಯೆ ,ನೆನಪುಗಳ ಮರೆಯೆ...
ಭಾವಗಳ ತೊರೆಯೆ ,ನೆನಪುಗಳ ಮರೆಯೆ...
ಒಲವ ಬೇಗುದಿಯಲ್ಲಿ , ಬಿಗುಮಾನದ ಗೋಡೆಯಲ್ಲಿ,
ಒಂಟಿತನವೇ ನೀ ಕೊಟ್ಟ ಉಡುಗೊರೆಯು ನನಗೆ ಗೆಳೆಯ...
ದಾರಿ ಕವಲೊಡೆದರೇನು , ಕನಸುಗಳು ಮುರಿದರೇನು ..
"ಎಲ್ಲಾದರೂ ಇರು, ಸದಾ ಸುಖದಿಂದಿರು" ಎಂದು ಈ ಮನ
"ಎಲ್ಲಾದರೂ ಇರು, ಸದಾ ಸುಖದಿಂದಿರು" ಎಂದು ಈ ಮನ
ನಿನಗಾಗಿಯೇ ಮಿಡಿಯುತಿಹುದು ಗೆಳೆಯ ...
- ಪ್ರಜ್ಞಮಾಲಾ
0 comments:
Post a Comment