"ಸಖ"
ದೀಪವ ಬೆಳಗುವ ಜ್ಯೋತಿ ನನ್ನವನು ...
ದೀಪವ ಬೆಳಗುವ ಜ್ಯೋತಿ ನನ್ನವನು ...
ಮಾತಿನ ರಾಗಕೆ ಮೌನದ ಲಯ ನನ್ನವನು ...
ಮನದ ದುಗುಡವ ಮರೆಸುವ ತಂಗಾಳಿ ನನ್ನವನು ...
ಮೌನದಲೇ ಮೆರೆದು ..ಕಂಗಳಲೇ ಸೆಳೆದು,
ಮನವನಾಳುವ ಒಡೆಯ ನನ್ನವನು ...
ಭಾವಗಳ ಸ್ಪೂರ್ತಿ ...ಪ್ರೇಮದರಸ ನನ್ನವನು
ಸಂತಸದ ಅಲೆಯಲಿ, ದುಃಖದ ರಭಸದಲಿ,
ನನ್ನ ಶಕ್ತಿ ...ಅನುರಕ್ತಿ ನನ್ನವನು . . .
0 comments:
Post a Comment