ನೀ ಇಷ್ಟವೋ ಎನಗೆ ,
ನಿನ್ನ ಮನಸು ಬಲು ಇಷ್ಟವೋ ಓ ಹುಡುಗ ....
ನಡೆವಾಗ ಹಾಗೆಯೇ ಕೈ-ಹಿಡಿವ ಪರಿ ಇಷ್ಟವೋ ಎನಗೆ ..
ನನಗಾಗೆ ಅರಸುವ ಆ ಕಣ್ಣುಗಳ ಹೊಳಪು ಇಷ್ಟವೋ ...
ಎದೆಯ ತಾಳ ತಪ್ಪಿಸುವ ..
ಆ ಕಂಚಿನ ಕಂಠ ಇಷ್ಟವೋ ಎನಗೆ ...
ಬೇಸರವ ಮರೆಸುವ ನಿನ್ನ ಅಪ್ಪುಗೆಯು ಇಷ್ಟವೋ ...
ಕೋಪವ ಕರಗಿಸುವ ಆ ಮೌನ ಇಷ್ಟವೋ ಎನಗೆ ...
ಪಿಸುಮಾತಲೇ ನಗಿಸುವ ಆ ಪರಿಯು ಇಷ್ಟವೋ...
ನೀ ಇಷ್ಟವೋ ಎನಗೆ ಓ ಹುಡುಗ ,
ನಿನ್ನ ಮನಸು ಬಲು ಇಷ್ಟವೋ ...
0 comments:
Post a Comment