ಭಾವಯಾನ
ನನ್ನ ಭಾವನೆಗಳ ಸುತ್ತ ಒಂದು ಪಯಣ
Thursday, 7 July 2011
"ನಾನು -ನೀನು"
ನಿನ್ನ ಕಂಡ ಕ್ಷಣ
ಮೈಮರೆತೆನು ನಾನು
ಬಾಳಲಿ ನವ-ಚೇತನ
ಪ್ರವಹಿಸಿದೆ ನೀನು
ಅರುಣ-ರಾಗವ ಎದೆಯಲಿ
ಝೇಂಕರಿಸಿದೆ ನೀನು
ಅಕ್ಷಿಗಳಲಿ ಅನುರಾಗದ
ಛಾಯೆಯೇ ನೀನು
ವಸುಧೆಯು ನಾನಾಗೆ ,
ಮಳೆ ಹನಿಯು ನೀನು
ನಿನ್ನೊಳಗೆ ನಾನಾಗಿ
ಭಾವಗಳು ಒಂದಾಗಿ
ಒಲ್ಮೆಯಲಿ ಸಾಗುತಿರೆ
ಆಹಾ ! ... ಜೀವನವೇ ಸೊಗಸು
-ಪ್ರಜ್ಞಮಾಲಾ
0 comments:
Post a Comment
Newer Post
Older Post
Home
Subscribe to:
Post Comments (Atom)
0 comments:
Post a Comment