ಮುಖವಾಡ
ಸ್ವಾರ್ಥ-ಸ್ಪರ್ಧಾ ಪ್ರಪಂಚದವಿದುವೆ ...
ವ್ಯಸನದಲಿ ಗೆಲ್ಲುವವನಿಗಿಹುದು ಜಯಕಾರ
ಅಪಾರ್ಥಗಳ ಸಾರ್ಥಕವಾಗಿಸಿ,
ಅರ್ಥಗಳ ವ್ಯರ್ಥವಾಗಿಸುವವನೇ ಮಹಾಶೂರ
ಭಾವಗಳ, ಮೌಲ್ಯಗಳ ಧಿಕ್ಕರಿಸಿ
ಕತ್ತಲ ಒಡಲೊಳಗೆ ವಂಚಿಸಿಸುವವನೇ ಸರದಾರ
ಹಿತವರಾರು ಎಂದು ಹುಡುಕ - ಹೊರಟರೆ ಜೋಕೆ,
ಕಾಣದೆ ಇರಬಹುದು ನಮ್ಮದೇ ಪ್ರತಿರೂಪ ಕೂಡ!
ದೇವನೇ ಬಲ್ಲ ಈ ಮುಖವಾಡದ ಚಮತ್ಕಾರ!
-ಪ್ರಜ್ಞಮಾಲಾ
0 comments:
Post a Comment