ನೆನಪು
ಆ ನಗು -ಮಾತು-ಮೌನ , ನಿನ್ನ ಸಾನಿಧ್ಯ
ಪ್ರತಿ ಕ್ಷಣದಲಿ ನನಸಾಯಿತು ಅದೆಷ್ಟೋ ಸ್ವಪ್ನ
ವಿನೋದವು ಕಳೆದ ಒಂದೊಂದು ಕ್ಷಣ
ಕಾಡಲಿಲ್ಲ ನೇಸರನ ಉರಿ ತಾಪ ,
ಕಾಣಲೂ ಇಲ್ಲ ಚಂದಿರನ ಪೆಚ್ಚು ನೋಟ,
ಹರಿಯುತ್ತಿದ್ದ ನಮ್ಮಯ ಮಾತಿನ ಧಾರೆಗೆ
ಮೌನದಲಿ ನಿದ್ದೆಗೆ ಜಾರಿದಳು ನೀರಧಿಯೂ ಹಾಗೆ
ನಗುವಿನ ಅಲೆಗೆ ಮೌನದ ತೀರ ,
ನಾಳೆಗಳ ಪರಿವೇ ಇಲ್ಲದೇ ಸಾಗಿತ್ತು ,
ನೆನಪುಗಳ ಸುಂದರ ವಿನಿಮಯ
ಜೊತೆಗಿದ್ದರೆ ನೀನು ಎಲ್ಲವೂ ಅನನ್ಯ
ಬೊಗಸೆಯಲ್ಲಿ ಹಿಡಿದಿಟ್ಟೆ ವಿಶೇಷವು ನನಗೆ
- ನಿನ್ನೊಡನಾಟದ ಪ್ರತಿಯೊಂದು ಕ್ಷಣ
ಹಿಡಿದಿಟ್ಟರೇನು ಮರೆಯಾದ ಆ ಕ್ಷಣಗಳ ,
ಮರಳಿ ಸೃಷ್ಟಿಸಲಾರೆ ಆ ಕ್ಷಣಗಳ ಸವಿ-ಸವಿ ಅನುಭವ
-ಪ್ರಜ್ಞಮಾಲಾ
0 comments:
Post a Comment