ಒಲವ ಶೀರ್ಷಿಕೆ
ಮನವ ಮೋಹಿಸಿದ ಬಯಕೆಯು ನೀನುಅಮ್ಮನ ಮಡಿಲ ನೆಮ್ಮದಿಯು ನೀನು
ನನ್ನೆಲ್ಲಾ ಕನಸುಗಳ ಅರಮನೆಯು ನೀನು
ನನ್ನೊಲವ ಪುಟದ ಶೀರ್ಷಿಕೆಯು ನೀನು
ಕಂಚಿನ ಕಂಠ , ಆ ನಗುವಿಗೆ ಸೋತಿಹೆನು ನಾನು
ನೋಡಿದಷ್ಟೂ ಸಾಲದು, ಕೇಳಿದಷ್ಟೂ ತೀರದು ,
ನನ್ನೆಲ್ಲಾ ಗೊಂದಲಗಳ -ಹುಚ್ಚಾಟಗಳ ಸಹಿಸುವ . . .
ನನ್ನೆಲ್ಲಾ ಗಾಯಗಳ ಮುಲಾಮು ನೀನು,
ಬಾಳ ಹಾದಿಯಲಿ ನಿನ್ನ ಒಡನಾಟವಿರಲು ,
ನನ್ನ "ಸಿರಿ"ಯು , "ಶ್ರೇಯಸ್ಸು" ನೀನು
ನಿನ್ನ ಒಲವ ಆರೈಕೆಯಲಿ ದಿನವೂ ಅರಳುತಿರುವೆನು ನಾನು
ಆಡಿದಷ್ಟೂ ಮುಗಿಯದು . . .
ಮತ್ತೇರಿಸುವ ನಶೆಯ ಆಟವು ನೀನು
ಮನವ ಮುದಗೊಳಿಸಿದ ಸುಂದರ ಕಲ್ಪನೆಯು ನೀನು
ಆ ನಿನ್ನ ಸಹನೆ
ಹೇಳದೇ , ಕೇಳದೇ ಅರಿತುಬಿಡುವೆ ನನ್ನ ಅಂತರಾಳವ
ಏನಿದು ನಿನ್ನ ಮಹಿಮೆ?
ನಿನ್ನ ಪ್ರತಿ ಗಳಿಗೆಯಲು ಜೊತೆಯಾಗುವ ಹಂಬಲವು ನನಗೆ
ಇಂದು-ಮುಂದೆಂದೂ ನಿನ್ನ ಬಲವಾಗುವ ಹಠವು ನನಗೆ
ಕಗ್ಗತ್ತಲೆಯ ಭೇದಿಸುವ ಕಿರಣವು ನೀನು
ನನ್ನೊಲವ ಪುಟದ ಶೀರ್ಷಿಕೆಯು ನೀನು
ಕಂಚಿನ ಕಂಠ , ಆ ನಗುವಿಗೆ ಸೋತಿಹೆನು ನಾನು
ನೋಡಿದಷ್ಟೂ ಸಾಲದು, ಕೇಳಿದಷ್ಟೂ ತೀರದು ,
ನನ್ನೆಲ್ಲಾ ಗೊಂದಲಗಳ -ಹುಚ್ಚಾಟಗಳ ಸಹಿಸುವ . . .
ನನ್ನೆಲ್ಲಾ ಗಾಯಗಳ ಮುಲಾಮು ನೀನು,
ಬಾಳ ಹಾದಿಯಲಿ ನಿನ್ನ ಒಡನಾಟವಿರಲು ,
ನನ್ನ "ಸಿರಿ"ಯು , "ಶ್ರೇಯಸ್ಸು" ನೀನು
ನಿನ್ನ ಒಲವ ಆರೈಕೆಯಲಿ ದಿನವೂ ಅರಳುತಿರುವೆನು ನಾನು
ಆಡಿದಷ್ಟೂ ಮುಗಿಯದು . . .
ಮತ್ತೇರಿಸುವ ನಶೆಯ ಆಟವು ನೀನು
ಮನವ ಮುದಗೊಳಿಸಿದ ಸುಂದರ ಕಲ್ಪನೆಯು ನೀನು
ಆ ನಿನ್ನ ಸಹನೆ
ಹೇಳದೇ , ಕೇಳದೇ ಅರಿತುಬಿಡುವೆ ನನ್ನ ಅಂತರಾಳವ
ಏನಿದು ನಿನ್ನ ಮಹಿಮೆ?
ನಿನ್ನ ಪ್ರತಿ ಗಳಿಗೆಯಲು ಜೊತೆಯಾಗುವ ಹಂಬಲವು ನನಗೆ
ಇಂದು-ಮುಂದೆಂದೂ ನಿನ್ನ ಬಲವಾಗುವ ಹಠವು ನನಗೆ
ಕಗ್ಗತ್ತಲೆಯ ಭೇದಿಸುವ ಕಿರಣವು ನೀನು
ಬಾಳ ಆಗಸದಲಿ ಮೂಡಿಬಂದ ಮಳೆಬಿಲ್ಲು ನೀನು
ಕ್ಷಣವೂ ಸ್ವರ್ಗ -ಸುಖವು ನನಗೆ
ನನ್ನ ರಮಣ , ನಲ್ಮೆಯ ಇನಿಯ ,ಪ್ರಿಯ ಸಖನು ನೀನು
ನನ್ನ ಸೌಭಾಗ್ಯ - ಸುಯೋಗ ,
ಕೈಗೆಟುಕಿದ ಸ್ವರ್ಗವು ನೀನು
ಕ್ಷಣವೂ ಸ್ವರ್ಗ -ಸುಖವು ನನಗೆ
ನನ್ನ ರಮಣ , ನಲ್ಮೆಯ ಇನಿಯ ,ಪ್ರಿಯ ಸಖನು ನೀನು
ನನ್ನ ಸೌಭಾಗ್ಯ - ಸುಯೋಗ ,
ಕೈಗೆಟುಕಿದ ಸ್ವರ್ಗವು ನೀನು
-ಪ್ರಜ್ಞಮಾಲಾ
0 comments:
Post a Comment