"ಕಂದಮ್ಮ"
ನಿನ್ನ ಮೊಗವ ಕಂಡು ,
ಚಂದಿರನೇ ನಾಚಿಹನು
ಮೋಡಗಳ ಮರೆಯಲಿ
ಹುಣ್ಣಿಮೆಯ ನಿನ್ನಂದವ ನೋಡಲು ಇಣುಕುತಿಹನು
ಈ ಪೇಚಾಟವ ಕಂಡು ,
ಅರಳಿದೆ ನಿನ್ನಲಿ ತುಂಟ ನಗು
ನಿನಗಂತೂ ಇದೆಲ್ಲವೂ ಒಂದು ವಿಸ್ಮಯ ಸೊಗಸು
ಚಂದಿರನ ನಾಚಿಕೆಗೆ ,
ನೇಸರನ ಉರಿ-ಮುನಿಸು . . .
ಮೋಡಗಳೇ ಕಾಯಿರಿ ,
ಮುಗ್ಧತೆಯೇ ನನ್ನೀ ಕಂದಮ್ಮನ ದಿರಿಸು
-ಪ್ರಜ್ಞಮಾಲಾ
0 comments:
Post a Comment