"ನಿರೀಕ್ಷಿತ - ಆಕಸ್ಮಿಕ"
ತಂಗಾಳಿಯಂತೆ ಸುಳಿಯಲಿಲ್ಲ ನೀನು ,
ಮಿಂಚಿನಂತೆ ಮನವ ಸೆಳೆಯಲಿಲ್ಲ ನೀನು,
ಕಣ್ಣೆದುರಿಗೇ ಇದ್ದ - - - ಅಪರಿಚಿತನು ನೀನು
ಮಾತಿನ ನಡುವಲಿ " ನಗಿಸುವ ಮೌನವು " ನೀನು,
ನಗುವಾಗ ಸೂಸುವ " ನೆನಪು " ನೀನು,
ನೆನಪಿನಲೇ ಗೀಚಿದ "ಕಲೆ"ಯು ನೀನು . . .
ಮೌನದಲಿ ಇಣುಕುವ " ಕನಸು " ನೀನು ,
ಕನಸಿನಲಿ ಮೂಡುವ " ಬಯಕೆ "ಯು ನೀನು . . .
ಸ್ವಚ್ಛಂಧ ಮನಕೆ " ಖುಷಿ "ಯ ಅಲೆಯು ನೀನು,
ದೂರ ಸರಿಸಲೂ- ಸರಿಯಲೂ ಆಗದ,
"ಇಷ್ಟ"- - - ಸಿಹಿ-ಕಷ್ಟ ನೀನು . . .
ನಿರೀಕ್ಷಿಸಿದ ---"ಅನಿರೀಕ್ಷಿತ - ಆಕಸ್ಮಿಕ"ವೇ ನೀನು . . .
-ಪ್ರಜ್ಞಮಾಲಾ
0 comments:
Post a Comment