ಅನು-ಬಂಧ
ಆಕಸ್ಮಿಕ ಈ ನಮ್ಮ ಭೇಟಿ. . . .
ಶುರುವಾಯಿತು ಸಂದೇಶ-ವಿನಿಮಯದ ನಮ್ಮ ನವೀನ ರೀತಿ . . .
ಇಣುಕಿದೆ ನಾ ಸ್ವಲ್ಪ ನಿನ್ನ ಬದುಕಿನಲಿ ,
ಹಂಚಿಕೊಂಡೆ ನನ್ನ ಬಾಳ ತುಣುಕನು ಸ್ನೇಹದಲಿ . . .
ಸಾಗಿ ಬಂದಿಹೆವು ವಿಚಿತ್ರ ದಾರಿಯನು ನಾವು ,
ನೆನಪುಗಳ ಅಗಣಿತ ಬೆಸೆದಿಹೆವು ನಾವು . . .
ಭಾಂದವ್ಯದ ಬುತ್ತಿ ತೆರೆದರೆ ,
ಹೊತ್ತೊಯ್ವುದು ಪ್ರತಿ ಪುಟವು,
ನೆನಪುಗಳ ಸುಮಧುರ ಲೋಕಕೆ . . .
ತಿರುವಿದರೆ ಪ್ರತಿ ಪುಟವ ,
ತೆರೆಯುವುದು ಭಾಂದವ್ಯದ ನಮ್ಮ ಪ್ರತಿ ಪದರು
ಸೋಜಿಗದಲೇ . . .
ಅಪರಿಚಿತ ಮುನ್ನುಡಿಗೆ ,ನಗವಿನ ಶುಭಾರಂಭ ,
ಕೋಪದ ಮೌನಕೆ , ಸಿಟ್ಟಿನ ವಾಗ್ಯುದ್ಧ ,
ಬಿರು ನುಡಿಗಳ ಪರದೆಯಲಿ, ಅಡಗಿಸಿಟ್ಟ ಆ ಕಾಳಜಿ,
ಸಂತೈಸುವ ಆಸರೆಯಲಿ , ಕಾಲೆಳವ ಆ ವಿನೋದ ಪರಿ. . .
ಹೆಸರಿಡಲು ಸಾಧ್ಯವೇ ನಮ್ಮ ಅನುಬಂಧಕೆ. . .
ಸ್ನೇಹವೂ ಇದೆ , ರಕ್ಷೆಯ ಬಂಧವೂ ಇದೆ ,
ಸ್ವಾರ್ಥವೂ ಇದೆ , ಮಮತೆಯೂ ಇದೆ ,
ಕಲ್ಪನೆಯೂ ಇದೆ , ನೈಜತೆಯೂ ಇದೆ . . .
ಒಲವ ಒರತೆಯೂ ಇದೆ , ಶೂನ್ಯವೂ ಇದೆ. . .
ಹೆಸರಿಡಲು ಸಾಧ್ಯವೇ ನಮ್ಮ ಅನುಬಂಧಕೆ?
ಸಲ್ಲದ ಪ್ರಶ್ನೆಗೆ , ಇಲ್ಲದ ಉತ್ತರವ ಹುಡುಕುವ,
ಬಾಲಿಶ ಹಠವ ಹಿಡಿದಿದೆ ಇಂದೇಕೋ ಈ ಮನ. . . .
-ಪ್ರಜ್ಞಮಾಲಾ
0 comments:
Post a Comment