ಹಿಮ ಕರಗಿದ ಬಳಿಕ
ಹಕ್ಕಿಯ ಇಂಚರದಲ್ಲಿ,
ನೇಸರನ ಕೆಂಪಿನಲ್ಲಿ ,
ಹಿಮದ ತಂಪಿನಲ್ಲಿ
ನಿನ್ನ ನೆನಪುಗಳು ನನ್ನ ಅಪ್ಪಿಹುದು ಗೆಳೆಯ
ಬಾಳಲಿ ಪ್ರೀತಿಯ ಮಾಧುರ್ಯವ
ತುಂಬಿದವ ನೀನೇ ಇನಿಯ
ಕನಸುಗಳ ಬಳ್ಳಿ ಮುರುಟಿತು ಹೇಗೋ
ಪ್ರೀತಿಯ ಅಮಿತ ಹಿತವ
ನಿನಗಾಗೆ ಕಾಯ್ದಿರಿಸಿಹೆನು ನಾನು
ಮನಸು ಕರಗದೆ ನಿನಗೆ ?
ನೆನಪುಗಳು ಕಾಡದೆ ನಿನಗೆ ?
ನೆನಪುಗಳು ಕಾಡದೆ ನಿನಗೆ ?
ಕಂಡರೂ ಕಾಣದಂತೆ ,
ನಿರ್ಜೀವ ಕೊರಡಾಗಿಹೆ ಏಕೋ ...
ನೀ ಹೀಗೇಕೋ ?....
ಹಿಮ ಕರಗಿದ ಬಳಿಕ ...
ಕತ್ತಲು ಕವಿದ ಬಳಿಕ ..
ಕತ್ತಲು ಕವಿದ ಬಳಿಕ ..
ಕಾಲ ನಿಂತ ಬಳಿಕ ...
ತೋರುವೆ ಯಾರಿಗೆ ಆ ಪ್ರೀತಿಯ ಹೇಳು,
ಸಮಯ ನಶಿಸಿದ ಬಳಿಕ ...?
0 comments:
Post a Comment