" ಪ್ರೀತಿ "
ಈ ಪ್ರೀತಿಯ ಪರಿಯ
ಹೇಗೆ ಬಿಚ್ಚಡಲಿ ಗೆಳತಿ ?
ಇದರರ್ಥವ -ನಿರಾಸೆಯ ಬಿಚ್ಚಡಿಲಿ ಹೇಗೆ ಗೆಳತಿ ?
ಇದರರ್ಥವ -ನಿರಾಸೆಯ ಬಿಚ್ಚಡಿಲಿ ಹೇಗೆ ಗೆಳತಿ ?
ಹೊಸತನದ ಸಂಭ್ರಮ ಇದು ,
ಹಳಸಿ , ನಾರುವ ಹುಚ್ಚು ಇದು
ನಿಲ್ಲಲಾರದ ಒರತೆಯು ಇದು,
ಚಿಮ್ಮಲಾರದ ಚಿಲುಮೆಯೂ ಇದು
ಕಂಗಳ ಸುಳಿ-ಮಿಂಚು ಇದು,
ಭೋರ್ಗರೆವ ಅಶ್ರುಧಾರೆಯೂ ಇದು
ತಂಗಾಳಿಯ ತಂಪು ಇದು, ಮುಂಗಾರಿನ ಅಭಿಷೇಕವಿದು
ಬರಗಾಲದ ಬರಡು ಇದು , ಪ್ರವಾಹದ ಆರ್ಭಟವೂ ಇದು
ಎದೆಯ ಬೆಳಗುವ ನಂದಾದೀಪವಿದು,
ಧಗಧಗಿಸುವ ಕಾಡ್ಗಿಚ್ಚು ಇದು
ಬೆಂಬಲಿಸುವ ಚೈತನ್ಯವಿದು ,
ದಿಗುಲುಗೊಳಿಸುವ ದುರ್ಬಲತೆಯೂ ಇದು
ಕಲ್ಪನೆಯ ಲಹರಿಯಲಿ ತೇಲಿಸುವ ಅಲೆಯು ಇದು,
ನೈಜತೆಯ ಕೂಪಕೆ ಮುಗ್ಗರಿಸಿ ತಳ್ಳುವ ಮುಳ್ಳು ಇದು
ಹೇಳೇ ಸಖಿ, ಈ ಪ್ರೀತಿಯ ಪರಿ-ಪರಿಯಾಗಿ ಬಿಚ್ಚಿಡಲಿ ಹೇಗೆ,
ಆಗಮನದ ಬೆನ್ನಲ್ಲೇ ನಿರ್ಗಮಿಸಿದ ಗ್ರಹಣವು ಇದು ...
ತೊಯ್ದಾಟ , ಹೊಯ್ದಾಟ , ಜಂಜಾಟಗಳ ಕಾಟವು ಇದು ...
ಬಿಡುವೆನೆಂದರೂ ಬೆಸೆಯುವ ಮಾಯೆ ಇದು ,ಜಾಲವು ಇದು ...
ಬಿಡುವೆನೆಂದರೂ ಬೆಸೆಯುವ ಮಾಯೆ ಇದು ,ಜಾಲವು ಇದು ...
-ಪ್ರಜ್ಞಮಾಲಾ
0 comments:
Post a Comment