ಸೋಲು
ಎದೆಯ ಕಣಿವೆಯಲ್ಲಿ
ಕತ್ತಲೆಯು ಕವಿದಿದೆ ...
ಬಾಳ ಆಗಸಕೆ
ಕಾರ್ಮೋಡಗಳ ಮುಸುಕಿದೆ ...
ನಂಬಿ ಸಾಗಿದ ದಾರಿಯೂ ಇಂದು
ನನ್ನ ಮೇಲೆ ಮುನಿದಿದೆ ....
ಮನದ ಗೂಡಿನಲ್ಲಿ
ಅಗೋಚರ - ಅನಿಶ್ಚಿತ ಗಳೇ ಸುಳಿಯುತಿವೆ...
ಉಕ್ಕುತಿರುವ ಕಂಬನಿಗೆ ,
ನರಳಾಟದ ಈ ಬೇಗುದಿಗೆ
ಅಂತ್ಯವ ಮನ ಅರಸುತಿದೆ ...
ಆಸರೆಯ ನಿರೀಕ್ಷೆಯಲಿ ,
ಮನ ಇಂದೇಕೋ ಪರಿತಪಿಸುತಿದೆ ...
0 comments:
Post a Comment