ಸಾವಿರ ಸಂವತ್ಸರ
ಕನಸುಗಳು . . . ವರ್ಣಗಳು ಈಗ
ಕನಸುಗಳು . . . ವರ್ಣಗಳು ಈಗ
ಕಂಗಳಲಿ ಚಿತ್ತಾರ ಬಿಡಿಸುತಿವೆ . . .
ಎದೆಯ ಬಡಿತ ಕರ್ಣಗಳ ತುಂಬುತಿದೆ . . .
ನನ್ನೆಲ್ಲಾ ಭಯವ . . . . ಮನದ ಆತಂಕವ . . . .
ಮೀರಬಹುದೇ ಈ ಪ್ರೀತಿಯ ಅನುಭಾವ ?
ಕಂಡ ಕ್ಷಣ ನಿನ್ನ ಬಿಂಬ
ಸೂಸಿದೆ ನೀನು ಕಂಗಳಲೇ ಒಲವ . . .
ಸೂಸಿದೆ ನೀನು ಕಂಗಳಲೇ ಒಲವ . . .
ಅಳಿಯಿತು ನನ್ನೆಲ್ಲಾ ಸಂದೇಹ. . .
ಮೀಟಿತು ಅನುರಾಗದ ಸ್ವರ . . .
ಹೆಜ್ಜೆಯೊಂದ ಇಟ್ಟೆ ನಿನ್ನೆಡೆಗೆ ನಾ
ಕಳೆದಂತಿದೆ ಸಾವಿರ ಸಂವತ್ಸರ
ನನ್ನ ಜೀವ , ನನ್ನ ಸಿರಿಯು ನೀನು ,
ಕಾದಿದ್ದೆ ನಾ ನಿನಗಾಗೇ ಅನುಕ್ಷಣವೂ ಚಿನ್ನ. . .
ನನ್ನ ಜೀವ , ನನ್ನ ಸಿರಿಯು ನೀನು ,
ಕಾದಿದ್ದೆ ನಾ ನಿನಗಾಗೇ ಅನುಕ್ಷಣವೂ ಚಿನ್ನ. . .
ಸಿಕ್ಕಾಗ ನಿನ್ನ ಸಾಂಗತ್ಯ ,
ಸ್ತಬ್ಧವಾಯಿತು ಕಾಲಚಕ್ರ . . .
ನೆನ್ನೆಗಳ ಭಯವಿಲ್ಲ ,
ನಾಳೆಗಳ ಚಿಂತೆಯೂ ಇಲ್ಲ
ನಿನಗಾಗೇ ಈ ಪಣವು ,
ನಿನ್ನುಸಿರಲಿ ಒಂದಾಗಿ ,
ಕಳೆಯುವೆ ಪ್ರತಿ-ಕ್ಷಣವೂ . . .
ಅಂದು -ಇಂದು . . . ಎಂದೆಂದೂ ಪ್ರೀತಿಸುವೆ ನಿನ್ನ
ಮನಮೋಹನನು ನೀನು . . .
ಚೈತ್ರದ ಚಿಗುರು ನೀನು ,
ಶ್ರಾವಣದ ಸೊಬಗು ನೀನು ,
ನನ್ನ ಒಲವ ವೃಂದಾವನದಲಿ
ಬಚ್ಚಿಡುವೆ ನಮ್ಮೀ ಒಲವ ,
ವಿಶ್ವಾಸದ ಗೂಡಲಿ ನಾ . . .
ವಿಶ್ವಾಸದ ಗೂಡಲಿ ನಾ . . .
ರಾಮನು ನೀನಾದರೆ ,
ಭಕ್ತಿಯಲಿ ಕಾಯ್ದ ಶಬರಿಯು ನಾ. . .
ಕಳೆದಂತಿದೆ ಸಾವಿರ ಸಂವತ್ಸರ . . .
ಭಕ್ತಿಯಲಿ ಕಾಯ್ದ ಶಬರಿಯು ನಾ. . .
ಕಳೆದಂತಿದೆ ಸಾವಿರ ಸಂವತ್ಸರ . . .
ಕಾಯ್ವಿಕೆಯ ವಿರಹವ ಮರೆಸಿದೆ ನಿನ್ನ ಆಗಮನ
ಕಾದಿದ್ದೆ ನಾ ನಿನಗಾಗೇ ಅನುಕ್ಷಣವೂ ಚಿನ್ನ. . .
ಅಂದು -ಇಂದು . . . ಎಂದೆಂದೂ ಪ್ರೀತಿಸುವೆ ನಿನ್ನ
ಕಾದಿದ್ದೆ ನಾ ನಿನಗಾಗೇ ಅನುಕ್ಷಣವೂ ಚಿನ್ನ. . .
ಅಂದು -ಇಂದು . . . ಎಂದೆಂದೂ ಪ್ರೀತಿಸುವೆ ನಿನ್ನ
-ಪ್ರಜ್ಞಮಾಲಾ
0 comments:
Post a Comment