Tuesday, 25 December 2012
Friday, 21 December 2012
ಒಲುಮೆ
ಒಲುಮೆ
ನಿನಗಾಗೆ ಪ್ರತಿ ಕ್ಷಣವೂ ಕಾದು ಸೋತಿರುವೆ ...
ನಿನ್ನೆಡೆಗೆ ಓಡುವ ಮನಸಿನ
ನಿನ್ನೆಡೆಗೆ ಓಡುವ ಮನಸಿನ
ವಿಪರೀತ ಆಟಕೆ ದಿನವೂ ಸಾಯುತಿರುವೆ ....
ಈ ಮೌನವೇಕೆ ?
ಅಂಜಿಕೆಯು ನಿನಗೇಕೆ ?
ಬಂದುಬಿಡು ಒಮ್ಮೆ ನನ್ನೆಡೆಗೆ ,
ತೋರಿಬಿಡು ನಿನ್ನ ಒಲುಮೆ ...
ಈ ಮೌನವೇಕೆ ?
ಅಂಜಿಕೆಯು ನಿನಗೇಕೆ ?
ಬಂದುಬಿಡು ಒಮ್ಮೆ ನನ್ನೆಡೆಗೆ ,
ತೋರಿಬಿಡು ನಿನ್ನ ಒಲುಮೆ ...
ಪ್ರತಿ ಹೆಜ್ಜೆಯಲಿ ಜೊತೆಯಾಗಿ...
ಉಸಿರುಸಿರಲೇ ಕೂಡಿ...
ಕಹಿಯ ನೋವ ಕರಗಿಸಿ ,
ಸಿಹಿಯ ಘಮವ ಹರಡಿ,
ಬೆಸೆಯುವೆ ನಮ್ಮ ಬೆಸುಗೆಯ ಬಿಗಿಯಾಗಿ...
ಸಿಹಿಯ ಘಮವ ಹರಡಿ,
ಬೆಸೆಯುವೆ ನಮ್ಮ ಬೆಸುಗೆಯ ಬಿಗಿಯಾಗಿ...
ಒಂದಾಗುವೆ ನಿನ್ನ ಬಾಳಲಿ ಸಖಿಯಾಗಿ,
ನಿನ್ನ ಒಲವಾಗಿ, ಪ್ರೀತಿಯ ಕಣ್ಣಾಗಿ...
ನಿನ್ನ ಒಲವಾಗಿ, ಪ್ರೀತಿಯ ಕಣ್ಣಾಗಿ...
Subscribe to:
Posts (Atom)