ಅದೇ ಇಂದು ನನ್ನನ್ನು "ಹಿಂಸಿ"ಸುತಿದೆ ....
"ಪ್ರಿಯ" ವೆನಿಸಿತ್ತು ನಿನ್ನ ಮುಂಗೋಪ ,
ಇಂದೇಕೆ ನನ್ನ ಜರಿಯುವ ಬೆಂಕಿಯಾಗಿದೆ ?.....
"ಮುದ" ನೀಡುತ್ತಿದ್ದ ನಿನ್ನ ಚೇಷ್ಟೆ ,
ಇಂದು ಅಂಕುಶವಾಗಿ ತಿವಿಯುತಿದೆ ....
ಆ ಕಂಗಳ "ಅನುರಕ್ತಿ" ,
ಇಂದೇಕೆ ದ್ವೇಷದ ಕಿಡಿಯ ಕಾರುತಿದೆ? ...
ಮಾತಿನ ಸುರಿಮಳೆಯಲಿ ಮುಗುಳ್ನಗುತ್ತಿದ್ದ ಆ ವದನ ,
ಇಂದೇಕೆ ನನ್ನ ಮೌನವನು ಬಯಸುತಿದೆ ? .....
ಸಾಮಿಪ್ಯ ಬಯಸಿದ್ದ ಆ ಒಲವ ಹೃದಯ ,
ಇಂದೇಕೆ " ಅಂತರ "ಗಳ ಬೆಳೆಸುತಿದೆ ....?
ನಿನ್ನಯ ಈ ಆಟಕೆ,
ಕಾಲನ ನಿಕಷಕೆ,
ಮನ ಮೂಕ-ವೇದನೆಗೆ ಶರಣಾಗಿದೆ ..
ಆದರೂ ಏಕೋ .....
ಮನದ ಜಾತಕ ಪಕ್ಷಿ ,ಒಲವ ವರುಣನ ನಿರೀಕ್ಷೆಯಲ್ಲಿದೆ ...
"ಪ್ರಿಯ" ವೆನಿಸಿತ್ತು ನಿನ್ನ ಮುಂಗೋಪ ,
ಇಂದೇಕೆ ನನ್ನ ಜರಿಯುವ ಬೆಂಕಿಯಾಗಿದೆ ?.....
"ಮುದ" ನೀಡುತ್ತಿದ್ದ ನಿನ್ನ ಚೇಷ್ಟೆ ,
ಇಂದು ಅಂಕುಶವಾಗಿ ತಿವಿಯುತಿದೆ ....
ಆ ಕಂಗಳ "ಅನುರಕ್ತಿ" ,
ಇಂದೇಕೆ ದ್ವೇಷದ ಕಿಡಿಯ ಕಾರುತಿದೆ? ...
ಮಾತಿನ ಸುರಿಮಳೆಯಲಿ ಮುಗುಳ್ನಗುತ್ತಿದ್ದ ಆ ವದನ ,
ಇಂದೇಕೆ ನನ್ನ ಮೌನವನು ಬಯಸುತಿದೆ ? .....
ಸಾಮಿಪ್ಯ ಬಯಸಿದ್ದ ಆ ಒಲವ ಹೃದಯ ,
ಇಂದೇಕೆ " ಅಂತರ "ಗಳ ಬೆಳೆಸುತಿದೆ ....?
ನಿನ್ನಯ ಈ ಆಟಕೆ,
ಕಾಲನ ನಿಕಷಕೆ,
ಮನ ಮೂಕ-ವೇದನೆಗೆ ಶರಣಾಗಿದೆ ..
ಆದರೂ ಏಕೋ .....
ಮನದ ಜಾತಕ ಪಕ್ಷಿ ,ಒಲವ ವರುಣನ ನಿರೀಕ್ಷೆಯಲ್ಲಿದೆ ...
0 comments:
Post a Comment