Wednesday 6 July, 2011

"ಬದುಕು"

ಮೂಡಿರಲು  ಮನದಲಿ ಗುರಿ ಮುಟ್ಟುವ ಧ್ಯೇಯ 
ಜೊತೆಯಾಗಿ ನಿನಗಿರಲಿ ಶ್ರಮವೆಂಬ ಸೈನ್ಯ 

ಬೀಸುವ ಬಿರುಗಾಳಿಯ ಧೈರ್ಯದಲಿ ಸೆಟೆದು,
ಕಡಲ ಅಬ್ಬರದ ಅಲೆಗಳ ಸ್ಥೈರ್ಯದಲಿ  ದಾಟಿ  ,  
ಮುಳ್ಳಿನ ಕಗ್ಗತ್ತಲೆಯ ಹಾದಿಗಳ ಕ್ರಮಿಸಿ 
ಏರುವೆ ನೀ ಸಾಧನೆಯ ಶಿಖರದೆತ್ತರವ

"ಜಯ"ವೆಂಬ ಫಲವ , ನವಚೈತನ್ಯವ   ಸವಿಯಲು
ಮರೆಯದಿರೆಂದಿಗೂ ಕತ್ತಲೆಯ ಕ್ಷಣಗಳನು ,
     ಇರುಳ ತಂಪನು ,
ಸುಧಾಂಶುವಿನ ಆರೈಕೆಯನು ...

ಬಾಳಿನ  ಸಾರವು ಇದುವೇ ಸದಾ . . .
                                          -ಪ್ರಜ್ಞಮಾಲಾ 




2 comments:

  1. ಈ ಕವಿತೆಯಲ್ಲಿ ಹೊಸತನ ಕಮ್ಮಿ ಆಗಿದೆ. ಶಬ್ಧಗಳಿಗೇ ಒತ್ತು ಕೊಟ್ಟ ಹಾಕಿದೆ...

    ReplyDelete
  2. @Subramanya Hegde

    howdu..bhaavanegalannu utprekshisi helalu swalpa shabhadagaLa mele hecchu ottu neediruve

    ReplyDelete