ತನುವೆಂಬ ದ್ವೀಪವು , ಮನವೆಂಬ ಕಡಲಲ್ಲಿ
ದಿನನಿತ್ಯ ನಿರೀಕ್ಷಿಸುವುದು
ನವಿರಾದ ಹಾಸ್ಯ
ಹಾಸ್ಯ-ಲಾಸ್ಯಗಳ ನಡುವಲ್ಲಿ ಇಹುದು
ಭೋರ್ಗರೆವ ವೇದನೆಯ ಒಂದು ಮೌನದ ಕ್ಷಣ
ತನುವೆಂಬ ದ್ವೀಪವು , ಮನವೆಂಬ ಕಡಲಲ್ಲಿ
ದಿನನಿತ್ಯ ನಿರೀಕ್ಷಿಸುವುದು
ಪುಟಿದೆಬ್ಬಿಸುವ ರೋಮಾಂಚನ
ಸಾಹಸ-ಧೈರ್ಯಗಳ ನಡುವಲ್ಲಿ ಇಹುದು
ಅಳುಕಿನ ಒಂದು ಮೌನದ ಕ್ಷಣ
ತನುವೆಂಬ ದ್ವೀಪವು , ಮನವೆಂಬ ಕಡಲಲ್ಲಿ
ದಿನನಿತ್ಯ ನಿರೀಕ್ಷಿಸುವುದು
ಪ್ರೀತಿ-ಬಾಂಧವ್ಯಗಳ ಅಯನ
ಸ್ನೇಹ-ವಿಶ್ವಾಸಗಳ ನಡುವಲ್ಲಿ ಇಹುದು
ಕೋಪ-ತಾಪಗಳ ಅಬ್ಬರದ ಕ್ಷಣ,
ಸ್ವಾರ್ಥ-ವೈಮನಸ್ಸಿನ ಒಂದು ಮೌನದ ಕ್ಷಣ
ಬಾಳ ಪಯಣದಲಿ ಸಾಗಲು ಅವಶ್ಯ
ಈ ಭಾವನೆಗಳ ಸಮ್ಮಿಲನ
-ಪ್ರಜ್ಞಮಾಲಾ
0 comments:
Post a Comment