ಬಯಸಿದಷ್ಟೂ ದೂರ ಹೋಗುವುದೀ "ಆಸೆ" ಎಂಬ ಗಾಳಿಪಟ
ಕೈಗೆಟುಕೆ ಸಿಹಿಯು , ಇರದಿರೆ ಕಹಿಯು
ಕೆಲವೊಮ್ಮೆ ಬಿಗಿದಪ್ಪಿ ನೀಡುವುದು ಸಂತಸ
ಒಮ್ಮೊಮ್ಮೆ ಕಾಡಿಸಿ-ಪೀಡಿಸಿ ನೀಡುವುದು ದುಃಖ
ಆದರೂ ಕೇಳದು ಈ ಹುಚ್ಚು ಮನಸು
ಕಾಯುತಾ ಕೂತಿಹುದು,
ಸೋಜಿಗದಿ ನಿಲುಕುವ
ಆಸೆಯೆಂಬ 'ಮರೀಚಿಕೆಯ' ನಿರೀಕ್ಷೆಯಲ್ಲಿ ನಿರಂತರ . . .
- ಪ್ರಜ್ಞಮಾಲಾ
0 comments:
Post a Comment