ಮನದ ತುಂಬಾ ಅಹಂಕಾರ
ಅಹಂಕಾರದೊಳಗೆ ಮತ್ಸರ
ಮತ್ಸರದಿಂದ ಕಳವಳ
ಕಳವಳದಿಂದ ವೈಸಿಕ
ಒಟ್ಟಾಗಿ ಸೇರಿದೊಡೆ
ಆಗುವುದು ವಿನಾಶಕ
ಸೌಮ್ಯತೆಯ ಬಿರಿದು,
ಕ್ರೌರ್ಯತೆಯು ಹರಿದು
ತಾಂಡವವಾಡುತಾ ಕ್ಷಯಿಸುವುದು ಅರಿವಿನ ಶರ
ಹರಿಸುವುದು ಹಗೆಯ ಮಹಾಪೂರ
ಮಸ್ತಕದ ಕೋಟೆಯು ಕುಸಿದು ,
ಅಸತ್ಯ, ಅಪಾರ್ಥಗಳು ಬಿರಿದು
ಹೊರಹೊಮ್ಮುವುದು ಅಟ್ಟಹಾಸದ ಜ್ವಾಲಾಗ್ನಿ
ಮನಗಳ ಒಡೆಯುತಾ, ಬಾಂಧವ್ಯಗಳ ಮುರಿಯುತಾ,
ನೂಕುವುದು ವ್ಯಸನಿಯನು,
ಜವನ ಜಾಲಕೆ , ಮೃತ್ಯುವಿನ ಕೂಪಕೆ . . .
-ಪ್ರಜ್ಞಮಾಲಾ
ಅಹಂಕಾರದೊಳಗೆ ಮತ್ಸರ
ಮತ್ಸರದಿಂದ ಕಳವಳ
ಕಳವಳದಿಂದ ವೈಸಿಕ
ಒಟ್ಟಾಗಿ ಸೇರಿದೊಡೆ
ಆಗುವುದು ವಿನಾಶಕ
ಸೌಮ್ಯತೆಯ ಬಿರಿದು,
ಕ್ರೌರ್ಯತೆಯು ಹರಿದು
ತಾಂಡವವಾಡುತಾ ಕ್ಷಯಿಸುವುದು ಅರಿವಿನ ಶರ
ಹರಿಸುವುದು ಹಗೆಯ ಮಹಾಪೂರ
ಮಸ್ತಕದ ಕೋಟೆಯು ಕುಸಿದು ,
ಅಸತ್ಯ, ಅಪಾರ್ಥಗಳು ಬಿರಿದು
ಹೊರಹೊಮ್ಮುವುದು ಅಟ್ಟಹಾಸದ ಜ್ವಾಲಾಗ್ನಿ
ಮನಗಳ ಒಡೆಯುತಾ, ಬಾಂಧವ್ಯಗಳ ಮುರಿಯುತಾ,
ನೂಕುವುದು ವ್ಯಸನಿಯನು,
ಜವನ ಜಾಲಕೆ , ಮೃತ್ಯುವಿನ ಕೂಪಕೆ . . .
-ಪ್ರಜ್ಞಮಾಲಾ
0 comments:
Post a Comment