" ನೆನಪು "
ನೆನಪುಗಳ ಲಹರಿಯು ಕದಡಿಹುದು ಮನವ ಇಂದು
ಭಾವನೆಗಳ ದ್ವಾರವು ಕಟ್ಟೆ ಒಡೆದಿಹುದು ಏಕೋ ಇಂದು...
ನಗಿಸಿ ಪುಳಕಿತಗೊಳಿಸಿದರೆ ಕೆಲವಷ್ಟು ...
ಉದ್ವೇಗಗಳ ಸುಳಿಯಲ್ಲಿ ಸೆಳೆಯುತಿಹವು ಮತ್ತಷ್ಟು ...
ಕಳೆದುಹೋದ ಕ್ಷಣಗಳ...ಕಳೆಯಲಾಗದ ಹೊತ್ತುಗಳ... ನೆನೆನೆನೆದು ,
ಚಂದಿರಗೆ ಹಾತೊರೆವ ಸಾಗರದಂತಾಗಿದೆ,
ನನ್ನವರ ನೆನಪುಗಳಲಿ ಮನವು ಇಂದು ...
ನೀ ಹೀಗೆ ಬರೆದರೆ ಹೇಗೆ?
ReplyDeleteನನ್ನ ಭಾವ ಮೊಳೆಯುವ ಹಾಗೆ
ಪದಗಳಿಗೇನು ಯಾರಿಲ್ಲದಿದ್ದರೂ ಉಳಿದು ಬಿಡುತ್ತವೆ
ಆ ಪದಗಳ ಮಧ್ಯದಲೆ ಕಳೆದು ನಾ ಹೋಗುವ ಹಾಗೆ!
ಮನದ ಭಾವ , ಭಾವಗಳ ದುಗುಡ ...ಪದಗಳಲಿ ಬಣ್ಣಿಸಲಿ ಹೇಗೆ ?
ReplyDeleteಹೊಸ ಅನುಭವಗಳ ಒಡನಾಟ,
ನಡುವೆ ತೂರಿ ಬರುವ
ಹಳೆಯ ನೆನಪುಗಳ ಕಾಟ ,
ಉತ್ಸಾಹದ ಮಹಾಪೂರ,
ನಡುವೆ ತಿವಿಯಲು ಕಾದಿಹ
ನಿರ್ದಯ ಆತಂಕಗಳ ಅಂಕುಶ ...
ಮನದ ದುಗುಡಗಳ ಪದಗಳಲಿ ತೆರೆದಿಡಲಿ ಹೇಗೆ?...
ಬಂಧಿಸಿರುವ ಸಂಕೋಲೆಯ ಕಳಚುವ ಆಸೆ ,
ಅಮ್ಮನ ಮಡಿಲಿಗೆ ಮರಳುವ ಆಸೆ ...
ನಿರಾತಂಕ -ಸಮ್ಮುದಗಳಲಿ ಕಳೆದು ಹೋಗುವ ಅತಿಯಾಸೆ...
ಈ ದ್ವಂದ್ವಗಳ ಬಣ್ಣಿಸಲಿ ಹೇಗೆ? .....
ಮನದ ದುಗುಡಗಳ ಪದಗಳಲಿ ತೆರೆದಿಡಲಿ ಹೇಗೆ?