Saturday 17 November, 2012

ನೆನಪು : ಸಾಧಿಸುವ ಅನಿವಾರ್ಯ ಛಲ ಮನಸಿನಲ್ಲಿ ಮೂಡಿ, ದೂರ ಬಂದಾಯ್ತು ...ಆದರೆ, ನನ್ನವರ ಆತ್ಮೀಯ "ಬೆಸುಗೆ" ಪ್ರತಿ ಕ್ಷಣ ಅಯಸ್ಕಾಂತದಂತೆ ಸೆಳೆಯುತ್ತಿದೆ .. ಅವರ ಸಾಂಗತ್ಯ,ಸಾಮಿಪ್ಯಕ್ಕೆ ಮನ ಹಪ-ಹಪಿಸುತ್ತಿದೆ



" ನೆನಪು "



ನೆನಪುಗಳ ಲಹರಿಯು ಕದಡಿಹುದು ಮನವ  ಇಂದು 


ಭಾವನೆಗಳ ದ್ವಾರವು ಕಟ್ಟೆ ಒಡೆದಿಹುದು ಏಕೋ  ಇಂದು...

ನಗಿಸಿ ಪುಳಕಿತಗೊಳಿಸಿದರೆ ಕೆಲವಷ್ಟು  ...

ಉದ್ವೇಗಗಳ ಸುಳಿಯಲ್ಲಿ ಸೆಳೆಯುತಿಹವು ಮತ್ತಷ್ಟು ...


ಕಳೆದುಹೋದ ಕ್ಷಣಗಳ...ಕಳೆಯಲಾಗದ ಹೊತ್ತುಗಳ... ನೆನೆನೆನೆದು ,

ಚಂದಿರಗೆ ಹಾತೊರೆವ ಸಾಗರದಂತಾಗಿದೆ, 

ನನ್ನವರ ನೆನಪುಗಳಲಿ ಮನವು ಇಂದು ...


2 comments:

  1. ನೀ ಹೀಗೆ ಬರೆದರೆ ಹೇಗೆ?
    ನನ್ನ ಭಾವ ಮೊಳೆಯುವ ಹಾಗೆ
    ಪದಗಳಿಗೇನು ಯಾರಿಲ್ಲದಿದ್ದರೂ ಉಳಿದು ಬಿಡುತ್ತವೆ
    ಆ ಪದಗಳ ಮಧ್ಯದಲೆ ಕಳೆದು ನಾ ಹೋಗುವ ಹಾಗೆ!

    ReplyDelete
  2. ಮನದ ಭಾವ , ಭಾವಗಳ ದುಗುಡ ...ಪದಗಳಲಿ ಬಣ್ಣಿಸಲಿ ಹೇಗೆ ?

    ಹೊಸ ಅನುಭವಗಳ ಒಡನಾಟ,
    ನಡುವೆ ತೂರಿ ಬರುವ
    ಹಳೆಯ ನೆನಪುಗಳ ಕಾಟ ,

    ಉತ್ಸಾಹದ ಮಹಾಪೂರ,
    ನಡುವೆ ತಿವಿಯಲು ಕಾದಿಹ
    ನಿರ್ದಯ ಆತಂಕಗಳ ಅಂಕುಶ ...

    ಮನದ ದುಗುಡಗಳ ಪದಗಳಲಿ ತೆರೆದಿಡಲಿ ಹೇಗೆ?...

    ಬಂಧಿಸಿರುವ ಸಂಕೋಲೆಯ ಕಳಚುವ ಆಸೆ ,
    ಅಮ್ಮನ ಮಡಿಲಿಗೆ ಮರಳುವ ಆಸೆ ...
    ನಿರಾತಂಕ -ಸಮ್ಮುದಗಳಲಿ ಕಳೆದು ಹೋಗುವ ಅತಿಯಾಸೆ...

    ಈ ದ್ವಂದ್ವಗಳ ಬಣ್ಣಿಸಲಿ ಹೇಗೆ? .....
    ಮನದ ದುಗುಡಗಳ ಪದಗಳಲಿ ತೆರೆದಿಡಲಿ ಹೇಗೆ?

    ReplyDelete