ಎಲ್ಲಿಹನು ಅವನು, ಹೇಳೆ ಸಖಿ ...
ಕಾಡಿಸುತಿರುವೆ ಹೀಗೇಕೆ ಗೆಳೆತಿ?
ನನ್ನ ಪ್ರೇಮಕಥೆಯ ನಾಯಕನು ,
ನನ್ನೊಲವಿನ ಸರದಾರನು ,
ಅನು"ರಾಗ"ದ ಗಾಯಕನು ,
ಪ್ರೇಮ-ಯಾನದ ನಾವಿಕನು,
ನನ್ನಿರುಳ ಬೆಳಗಿಸುವ ಸುಧಾಂಶುವು,
ನನ್ನೊಡೆಯ...ನನ್ನ ಜೀವನದ ಅಧಿಪತಿಯು ...
ಈ ಪ್ರೇಮದ ಪರಿಯ ಇನ್ನೆಂತು ಬಣ್ಣಿಸಲಿ !
ಅವನ ಕಾಣುವ ತವಕ ಇನ್ನೆಂತು ವರ್ಣಿಸಲಿ !
ಕುತೂಹಲ ಆಕರ್ಷಣೆಯಾಗಿ,
ಆಕರ್ಷಣೆಯು ನಶೆಯಾಗಿ ,
ಅಕ್ಷಿಗಳು ಅವನ ರೂಪ ಬಚ್ಚಿಡಲು ಬಯಸುತಿವೆ
ಕರ್ಣಗಳು ಅವನ ಮಾತುಗಳ ಸವಿಯಲು ಮಿಡಿಯುತಿವೆ
ಕನಸುಗಳು ನನಸಾಗಲು ಹಂಬಲಿಸುತಿವೆ
ಅವನ ಸಾಂಗತ್ಯ ಮರೀಚಿಕೆಯಾಗೆ ,
ಕನಸುಗಳು ಚೂರಾಗುವ ತುಮುಳ ,
ಸಣ್ಣ ನೋವು ತರುತಿದೆ. . .
ಇನ್ನಾದರೂ ಕಾಡಿಸುವ ಮನಸು ಬದಲಾಯಿಸೇ ಓ ಪ್ರಿಯ ಸಖಿ
ಹೇಳಿಬಿಡೇ ಯಾರು ಆ ಮನಸಿಜನು ?
ಇರುವನೆಲ್ಲಿ ನನ್ನ ಚಿತ್ತ-ಚೋರನು?. . .
-ಪ್ರಜ್ಞಮಾಲಾಇರುವನೆಲ್ಲಿ ನನ್ನ ಚಿತ್ತ-ಚೋರನು?. . .
0 comments:
Post a Comment